ಗೆದ್ದಲು ಹುಳುವಿನ ಎದೆಗೂಡೊಳಗೂ ಎರಡು ಹನಿ ನೀರಿನ ದಾಹ.
ಅದು ತೆವಳುತ್ತಿದ್ದ ಗರಿಕೆಯಾಚೆಗಿನ ಇಬ್ಬನಿಗೆ ಆಗಷ್ಟೇ ಅಪ್ಪಿದ ಸಾವು,
ತೊಟ್ಟಿಲಗೂಸಿನ ಹಸಿತುಟಿಯ ಮೇಲೆ ತಾಯ ಬೆಳ್ಳನೆಯ ರಕುತ,
ತೊಟ್ಟಿಲು ಕಟ್ಟಿದ್ದ ಅಡಕೆ ಜಂತೆಗೆ ಕುಸಿದು ಬೀಳುವ ತೀರದ ಆಸೆ.

ಆವೆಮಣ್ಣಿನ ಹೊಟ್ಟೆಯೊಳಗೆ ಎರೆಹುಳುವೊಂದರ ಗರ್ಭಪಾತವಂತೆ,
ಸತ್ತ ಭ್ರೂಣ ತಿಂದು ಮೈಮುರಿಯಲೆತ್ನಿಸುವ ಧೂಪದಮರದ ಬೀಜ.
ಹೊಂಡಬಿದ್ದ ಡಾಂಬರುರಸ್ತೆಯ ಮಧ್ಯದಲ್ಲೇ ಗರಿಕೆ ಸಸಿಯು ಕಣ್ ಬಿಟ್ಟು,
ಪಾದಚಾರಿ ಗಂಡ ಸತ್ತವಳ ಕಣ್ ನೀರು ಸಿಡಿದು ಗರಿಕೆಯ ಎದೆಯೂ ಸತ್ತಿದೆ.
ಸ್ಲೇಟು ಹಿಡಿದ ಕೂಸಿನ ಕೈಯೊಳಗಿನ ಸೀಮೆಸುಣ್ಣದ ತಲೆಯಷ್ಟೇ ಬಾಕಿಯಾಗಿ,
ಎರಡೂ ಕಣ್ಣ ನಡುವೆ ರೇಡಿಯಂ ಸ್ಟಿಕ್ಕರ್ ಅಂಟಿದ ಹುಡುಗಿ ಇಷ್ಟೇ ಹುಟ್ಟುವಳು.
ಕುಂಟುಹುಡುಗನೊಬ್ಬ ಮಣ್ಣರಸ್ತೆಯ ಮೇಲೆ ಬಿಡಿಸಿದ ಚಿತ್ರದ ಮೇಲೆ ಮಳೆ ಬಿದ್ದು,
ಕುಕ್ಕರುಗಾಲಿನಲ್ಲಿ ನೋಡುತ್ತಿದ್ದ ಎವೆಯಿಕ್ಕದ ಮುದುಕನ ಧ್ಯಾನದ ಕೊಲೆ.
ಇಲ್ಲಿ ಹುಟ್ಟುವುದಕ್ಕೂ ಸಾಯುವುದಕ್ಕೂ ವ್ಯಾಕರಣ ಬಲ್ಲವನನ್ನು ಹುಡುಕುತ್ತೇನೆ,
ಅವನು ಸಿಕ್ಕಿದ ದಿನ ಆತನ ಭುಜಕ್ಕೊರಗಿ ಬಾಯಾರಿದ ಎರೆಹುಳುವಿಗೂ,
ಹಾಗೆ ಬಂದು ಹೀಗೆ ಆರಿದ ಇಬ್ಬನಿಗೂ ಮಧ್ಯೆ ಚಿಗಿತ ಪ್ರೇಮದ ಕಥೆಯನ್ನು..
ಬೂದಿಹುಡಿಯ ಮೇಲೆ ಬೆರಳದ್ದಿ ಬರೆದು ತೋರಿಸುವ ಆಸೆಯೊಂದು ಹುಟ್ಟಿದೆ.

ಮೊದಲ ಓದಿಗೆ ಅಸ್ಪಷ್ಟವಾಗಿ ಚೆಲ್ಲಿದ್ದ ಭಾವಗಳನ್ನು ಇನ್ನೊಮ್ಮೆ ಓದಿ ಓರಣಗೊಳಿಸಿಕೊಂಡೆ.. ಪ್ರೀತಿಯನ್ನು ಪ್ರಸ್ತುತ ಪಡಿಸಿದ ರೀತಿ ವಿಭಿನ್ನವಾಗಿದೆ..
ReplyDeleteಇಲ್ಲಿ ಹುಟ್ಟುವುದಕ್ಕೂ ಸಾಯುವುದಕ್ಕೂ ವ್ಯಾಕರಣ ಬಲ್ಲವನನ್ನು ಹುಡುಕುತ್ತೇನೆ,
ಅವನು ಸಿಕ್ಕಿದ ದಿನ ಆತನ ಭುಜಕ್ಕೊರಗಿ ಬಾಯಾರಿದ ಎರೆಹುಳುವಿಗೂ,
ಹಾಗೆ ಬಂದು ಹೀಗೆ ಆರಿದ ಇಬ್ಬನಿಗೂ ಮಧ್ಯೆ ಚಿಗಿತ ಪ್ರೇಮದ ಕಥೆಯನ್ನು..
ಬೂದಿಹುಡಿಯ ಮೇಲೆ ಬೆರಳದ್ದಿ ಬರೆದು ತೋರಿಸುವ ಆಸೆಯೊಂದು ಹುಟ್ಟಿದೆ.
ಈ ಸಾಲುಗಳು ಮನಸ್ಸಿನಲ್ಲುಳಿಯುತ್ತವೆ.. ಬೂದಿ ಹುಡಿಯ ಮೇಲೆ ಬೆರಳದ್ದಿ ಎರೆಹುಳುವಿನ ಹಸಿವು ಹಿಂಗಿಸಿದ ಪ್ರೇಮ ಕಥೆಯನ್ನು ಬರೆಯುವ ಕವಿಮನದ ಕಲ್ಪನೆ ಸೋಜಿಗವೆನಿಸಿತು.. ಚೆನ್ನಾಗಿದೆ..:)
ಬ್ಲಾಗ್ ಚೆನ್ನಾಗಿದೆ.ಆಸ್ವಾಧನೆಯ ಭಾಗ್ಯಕ್ಕೆ ಮುಂದೆ ಆಸೆಗಳು ನೆರವೆರಬಹುದು.ನಿಮ್ಮ ಕನಸುಗಳ ಬಗ್ಗೆ ಅಚ್ಚರಿಗೊಂಡಿದ್ದೇನೆ.ಅದು ಎಲ್ಲರಿಗೂ ಅಸಾಧ್ಯ ನೀವು ಎತ್ತರಕ್ಕೇರಬೇಕು ,ಸಾಹಿತ್ಯ ಮತ್ತು ಮನಸ್ಸು ವಿಶ್ವಕ್ಕೆ ವಿಶಾಲವಾಗಲಿ ಎಂದು ಹಾರೈಸುತ್ತೇನೆ.
ReplyDeleteಕುಕ್ಕರುಗಾಲಿನಲ್ಲಿ ನೋಡುತ್ತಿದ್ದ ಎವೆಯಿಕ್ಕದ ಮುದುಕನ ಧ್ಯಾನದ ಕೊಲೆಯಲ್ಲಿ
ReplyDeleteತೊಟ್ಟಿಲಗೂಸಿನ ಹಸಿತುಟಿಯ ಮೇಲೆ ತಾಯ ಬೆಳ್ಳನೆಯ ರಕುತದ ಬಣ್ಣದಲ್ಲಿ
ಹುಟ್ಟುವುದಕ್ಕೂ ಸಾಯುವುದಕ್ಕೂ ವ್ಯಾಕರಣ ಬಲ್ಲವನ ಹುಡುಕುತ್ತ ಪ್ರೇಮದ ಕಥೆಯನ್ನ ಹೇಳುವ ಆಸೆಯ ಸಾಲುಗಳಿಗೆ ಸೋತಿದ್ದೇನೆ...
ಇಂತಹ ಸಾಲುಗಳ ತೀವ್ರತೆಯಲ್ಲಿ ಸದಾ ಸೋಲುವ ಆಸೆಯಿದೆ, ಬರೆಯುತ್ತಿರಿ ಸದಾ ಹೀಗೇ...