Wednesday, 7 March 2012

ವಿಶ್ವ ಮಹಿಳಾ ದಿನದ ಸಂದೇಶ
















______________________________________________________________________________________________________________________

ಭೂಮಿತೂಕದ ಸಹನೆಯ ಹೆಣ್ಣು ಗಂಡಿಗಿಂತಲೂ ಒಂದು ಕೈ ಮಿಗಿಲಾದ ತಾಕತ್ತುಳ್ಳ ಜೀವ, ಇರುವೆಯ ಕಣ್ಣಿನಷ್ಟು ಸೂಕ್ಷ್ಮದ ಮನಸ್ಸಿನ ಹೆಣ್ಣು ನಮ್ಮಂಥಹ ಗಂಡುಪ್ರಾಣಿಗಳಿಗೆ ಮೊಗೆಮೊಗೆದು ಪ್ರೀತಿ ಕೊಟ್ಟ ಜೀವ. ತೊಟ್ಟಿಲಲ್ಲಿ, ಕಿರುಬೆರಳಲ್ಲಿ, ಜಗತ್ತು ಅರ್ಥವಾದದ್ದೇ ಹೆಣ್ಣುಜೀವದ ಮೂಲಕ. ಬೆಟ್ಟವನ್ನೇ ಬಗೆದು ಎರಡು ಭಾಗ ಮಾಡಿ ರಸ್ತೆ ರೂಪಿಸಿದ ದಶರಥ ಮಾಂಝಿಯೊಳಗಿದ್ದುದೂ ಹೆಣ್ಣುಜೀವವೊಂದರ ಕಡುಪ್ರೀತಿ. ದಿನವೂ ನಮ್ಮನ್ನು ಸಹನೆಯಿಂದ, ಪ್ರೀತಿಯಿಂದ ಮಮತೆಯಿಂದ ಪೊರೆಯುವ ಹೆಣ್ಣುಜೀವಗಳು ಇನ್ನಷ್ಟು ತಂಪಾಗಿ ಬದುಕಲಿ. ಹೆಣ್ಣು ಯಾವತ್ತೂ ಗಂಡಿನ ಗುಲಾಮಳಲ್ಲ.. ಗಂಡಸರಾದ ನಮ್ಮ ದುರಹಂಕಾರಗಳು ಹೆಣ್ಣು ಜೀವದೆಡೆಗಿನ ನಮ್ಮ ದಬ್ಬಾಳಿಕೆಗಳು ಕಟು ಧೋರಣೆಗಳು ಇನ್ನಾದರೂ ಚೂರೂ ಉಳಿಯದೇ ಅಳಿದುಹೋಗಲಿ.


No comments:

Post a Comment